ಪ್ಯಾನಿಗಲ್ ವಿ 2 ಬೈಕಿನ ಬಿಡುಗಡೆಗೆ ಸಜ್ಜಾದ ಡುಕಾಟಿ | ವಿವರಣೆ ಹಾಗೂ ಇನ್ನಿತರ ವಿವರಗಳು

2020-08-20 36

ಡುಕಾಟಿ ಕಂಪನಿಯು ಈ ವರ್ಷದ ಏಪ್ರಿಲ್‌ ತಿಂಗಳಿನಲ್ಲಿ ಪ್ಯಾನಿಗಲ್ ವಿ 2 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿತ್ತು. ಟೀಸರ್ ಬಿಡುಗಡೆಯ ನಂತರ ಈ ಬೈಕಿನ ಬಿಡುಗಡೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ಈ ಬೈಕಿನ ಬಿಡುಗಡೆಯನ್ನು ಮುಂದೂಡಲಾಗಿದೆ.

ಡುಕಾಟಿ ಕಂಪನಿಯು ಪ್ಯಾನಿಗಲ್ ವಿ 2 ಬೈಕ್ ಅನ್ನು ಆಗಸ್ಟ್ 26ರಂದು ಬಿಡುಗಡೆಗೊಳಿಸಲಿದೆ. ಪ್ಯಾನಿಗಲ್ ವಿ 2 ಬೈಕಿನ ಬುಕ್ಕಿಂಗ್ ಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಿಸುವ ಸಾಧ್ಯತೆಗಳಿವೆ. ಆದರೆ ಕೆಲವು ಡೀಲರ್ ಗಳು ಈ ಎಂಟ್ರಿ ಲೆವೆಲ್ ಸೂಪರ್‌ಬೈಕ್‌ಗಾಗಿ 1 ಲಕ್ಷ ರೂಪಾಯಿಗಳನ್ನು ಸ್ವೀಕರಿಸಿ ಬುಕ್ಕಿಂಗ್ ಗಳನ್ನು ಆರಂಭಿಸಿದ್ದಾರೆ.

ಪ್ಯಾನಿಗಲ್ ವಿ 2 ಬೈಕ್ ಅನ್ನು 959 ಬೈಕಿನ ಬದಲಿಗೆ ಬಿಡುಗಡೆಗೊಳಿಸಲಾಗುತ್ತಿದೆ. ಪ್ಯಾನಿಗಲ್ ವಿ 2 ಡುಕಾಟಿ ಕಂಪನಿಯ ಮೊದಲ ಬಿಎಸ್ 6 ಬೈಕ್ ಆಗಿದೆ.

ಪ್ಯಾನಿಗಲ್ ವಿ 2 ಬೈಕಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires